ಶ್ರೀ ಪಾಂಡುರಂಗ ಭಜನಾ ಮಂದಿರ

ಶ್ರೀ ಹರಿ ಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರ ಬಿಕರ್ನಕಟ್ಟೆ ಮಂಗಳೂರು

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯುಪಾಸತೇ ಲೋಕಾಃ ಸಮಸ್ತಾ ಸುಖಿನೋ ಭವಂತು ಸರ್ವೇಜನಾಃ ಸುಖಿನೋ ಭವಂತು ಓ೦ ಶ್ರೀ' ರಾಮ್ ಜಯರಾಮ್ ಜಯ ಜಯ ರಾಮ್

Shri HariHara Panduranga Bhajana Mandira Bikarnakate Mangalore

ತೇಷಾಂನಿತ್ಯಾಭಿಯುಕ್ತಾ ನಾಂ। ಯೋಗಕ್ಷೇಮಂ ವಹಾಮ್ಯಹಂ ಕಲೌಚ ಹರಿಕೀರ್ತನಂ ಮೃಣಾ ಪಾಂಡುರಂಗ ಹರಿವಿಠಲ್ ಓಂ ಶ್ರೀ ರಾಮ್ ಜಯರಾಮ್ ಜಯ ಜಯ ರಾಮ್

ಶ್ರೀ ಹರಿ ಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರ ಬಿಕರ್ನಕಟ್ಟೆ ಮಂಗಳೂರು

ಶ್ರೀ ರಾಮ್ ಜಯರಾಮ್ ಜಯ ಜಯರಾಮ್ | ಶ್ರೀ ರಾಮ್ ಜಯರಾಮ್ ಜಯ ಜಯರಾಮ್

ನವೆಂಬರ್ 5, 2023 ರಿಂದ ವಾರ್ಷಿಕ ನಗರ ಭಜನೆ ಆರಂಭವಾಗಲಿದೆ.
About

Bajana Mandira

ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರ


ಮಂಗಳೂರು ನಗರದ ಬಿಕರ್ನಕಟ್ಟೆಯ ಹೆದ್ದಾರಿಯಿಂದ ಶಕ್ತಿನಗರಕ್ಕೆ ಪ್ರಾರಂಭವಾಗುವ ರಸ್ತೆಯ ಸನಿಹದ ಕಂಡೆಟ್ಟುವಿನಲ್ಲಿ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಶ್ರೀ ಹರಿ ಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರವು ಇತಿಹಾಸ ಪ್ರಸ್ಸಿದ್ದವಾಗಿದೆ. 1925 ನೇ ಇಸವಿಯಲ್ಲಿ ಶ್ರೀ ಹರಿಹರ ಭಜನಾ ಸೇವಾ ಸಂಘ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡು 98 ವರ್ಷಗಳ ಇತಿಹಾಸವಿರುವ ಈ ಮಂದಿರವು ಹಿರಿಯರ ಹಾಗೂ ಭಕ್ತರ ಸಹಾಯ ಹಸ್ತದಿಂದ ಅಭಿವೃದ್ಧಿಯನ್ನು ಕಾಣುತ್ತಾ ಊರ ಹಾಗೂ ಪರವೂರ ಭಗವದ್ಭಾಕ್ತರ ಆರಾಧನಾ ಕ್ಷೇತ್ರವೆನಿಸಿದೆ. 1975ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಪ್ರಸಿದ್ದ ಶಿಲ್ಪಿಯಾದ ಶ್ರೀಯುತ ರೆಂಜಾಳ ಗೋಪಾಲಕೃಷ್ಣ ಶೆಣೈ ಯವರಿಂದ ಕೆತ್ತಲ್ಪಟ್ಟ ಶ್ರೀ ಪಾಂಡುರಂಗ ದೇವರ ಮೂರ್ತಿಯನ್ನು ಆರಾದಿಸುತ್ತಾ ಬರುತ್ತಿದ್ದು ಇದು ಈಗಲೂ ಭಕ್ತರ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ.
2001ರಲ್ಲಿ ಶ್ರೀ ಪಿ ಉಮಾನಾಥ್ ಶೆಣೈ ಮತ್ತು ಮಕ್ಕಳು ನೀಡಿದ ಶ್ರೀ ರುಖುಮಾಯಿ ಅಮ್ಮನವರ ಮೂರ್ತಿಯ ಪ್ರತಿಷ್ಟಾಪನೆಯಾಯಿತು. ಈ ಸಂದರ್ಭದಲ್ಲಿ ಪ್ರಾರಂಭದಿಂದ ಆರಾಧಿಸಿಕೊಂಡು ಬರುತ್ತಿದ್ದ ಶ್ರೀ ರಾಮ ದೇವರ ಭಾವಚಿತ್ರವನ್ನು ಗರ್ಭಗುಡಿಯಲ್ಲಿ ಇಟ್ಟು ಪೂಜಿಸಲಾಗಿತ್ತಿದೆ.
ಶ್ರೀ ಪಾಂಡುರಂಗನ ಮಂದಿರದಲ್ಲಿ ವರ್ಷವಿಡೀ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತಿರುತ್ತದೆ. ಡಿಸೆಂಬರ್ ತಿಂಗಳಲ್ಲಿ ಗೀತಾಜಯಂತಿಯಂದು ವಾರ್ಷಿಕ ವಿಶೇಷ ಕಾರ್ಯಕ್ರಮ ಏಕಾಹ ಭಜನೋತ್ಸವ ನಡೆಯುತ್ತದೆ.



Renovation

Old To New

Latest

News & Events

ಸಾಮೂಹಿಕ ಅರ್ಚನೆ ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಲಿ

ಮಂಗಳೂರು : ನಗರದ ಬಿಕರ್ನಕಟ್ಟೆ ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರದಲ್ಲಿ ಶ್ರೀ ಪಾಂಡುರಂಗ ವಿಠಲ ದೇವರಿಗೆ ಸಾಮೂಹಿಕ ಲಕ್ಷ ತುಳಸಿ ಅರ್ಚನೆ ವೇದಮೂರ್ತಿ ಸಚ್ಚಿದಾನಂದ ನೀಗ್ಲೆ ನೇತೃತ್ವಾದಲ್ಲಿ ಸಂಪನ್ನಗೊಂಡಿತು. ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ಪಂಜ ಭಾಸ್ಕರ್ ಭಟ್. ತುಳಸಿಯ ಮಹತ್ವನ್ನು ತಿಳಿಸಿ. ತುಳಸಿ ಇಲ್ಲದೆ ಶ್ರೀ ಹರಿಗೆ ಪೂಜೆಯೇ ಇಲ್ಲ. ಭಜನೆ ಮತ್ತು ತುಳಸಿ ಎರಡು ಪಾಂಡುರಂಗನಿಗೆ ಪ್ರಿಯವಾದ ವಸ್ತು. ಈ ರೀತಿಯ ಸಾಮೂಹಿಕ ಅರ್ಚನೆಗಳು ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹೇಳಿದರು. ಹಿರಿಯರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಶಾಸಕ ವೇದವ್ಯಾಸ ಕಾಮತ್, ಕಾರ್ಪೋರೇಟೋರ್ ಶಕೀಲಾ ಕಾವ, ಗಣ್ಯರು , ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧರು. ದೇವರಿಗೆ ಅರ್ಚನೆಗೊಂಡ ತುಳಸಿಯನ್ನು ಕಾಸರಗೋಡಿನ ಉಕ್ಕಿನಡ್ಕಸ್ ಆಯುರ್ವೇಧಿಕ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.


ಆಮಂತ್ರಣ ಪತ್ರಿಕೆ ಬಿಡುಗಡೆ - ಲಕ್ಷ ತುಳಸಿ ಅರ್ಚನೆ

ಮಂಗಳೂರಿನ ಬಿಕರ್ನಕಟ್ಟೆ ಶ್ರೀ ಹರಿಹರ ಪಾಂಡುರಂಗ ಭಜನಾ ಮಂದಿರ ಟ್ರಸ್ಟ್ ವತಿಯಿಂದ ಜು.೩೦ ರಂದು ನಡೆಯುವ ಸಾಮೂಹಿಕ ಲಕ್ಷ ತುಳಸಿ ಆಮಂತ್ರಣ ಪತ್ರಿಕೆಯನ್ನು ವಿಧ್ವಾನ್ ಮುರಳಿ ಭಟ್ ಬಿಡುಗಡೆ ಮಾಡಿದರು. ಅಧ್ಯಕ್ಷ ವಿ.ಜಯರಾಮ , ಕಾರ್ಯದರ್ಶಿ ರಾಧಾಕೃಷ್ಣ ಕೋಶಧಿಕಾರಿ ರಮೇಶ್ , ಸದಸ್ಯರಾದ ರಾಮ ಕುಂದರ್, ಮನೋಹರ್ ರೈ, ಉಮೇಶ್ ಜಯಶ್ರೀ ಗೇಟ್ , ಪ್ರೊ. ಚಂದ್ರಶೇಖರ, ರಾಜೇಶ್, ರಾಮಚಂದ್ರ, ಚರಣ್ , ಸಂತೋಷ್ ಇದ್ದರು.


Download Invitation

ಮಂದಿರದಲ್ಲಿ ಜರಗುವ

ವಿಶೇಷ ಸೇವೆಗಳು

  • ಕ್ರ.ಸಂ
    ಸೇವಾ ಪಟ್ಟಿ
    ನಗದು
    1
    ಶನಿವಾರದ ಪೂಜೆ
    ರೂ 600
    2
    ನವರಾತ್ರಿ ಪೂಜೆ
    ರೂ 600
    3
    ರಂಗಪೂಜೆ
    ರೂ 5000