ಮಂಗಳೂರು ನಗರದ ಬಿಕರ್ನಕಟ್ಟೆಯ ಹೆದ್ದಾರಿಯಿಂದ ಶಕ್ತಿನಗರಕ್ಕೆ ಪ್ರಾರಂಭವಾಗುವ ರಸ್ತೆಯ ಸನಿಹದ ಕಂಡೆಟ್ಟುವಿನಲ್ಲಿ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಶ್ರೀ ಹರಿ ಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರವು ಇತಿಹಾಸ ಪ್ರಸ್ಸಿದ್ದವಾಗಿದೆ.
1925 ನೇ ಇಸವಿಯಲ್ಲಿ ಶ್ರೀ ಹರಿಹರ ಭಜನಾ ಸೇವಾ ಸಂಘ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡು
98 ವರ್ಷಗಳ ಇತಿಹಾಸವಿರುವ ಈ ಮಂದಿರವು ಹಿರಿಯರ ಹಾಗೂ ಭಕ್ತರ ಸಹಾಯ ಹಸ್ತದಿಂದ ಅಭಿವೃದ್ಧಿಯನ್ನು ಕಾಣುತ್ತಾ ಊರ ಹಾಗೂ ಪರವೂರ ಭಗವದ್ಭಾಕ್ತರ ಆರಾಧನಾ ಕ್ಷೇತ್ರವೆನಿಸಿದೆ.
1975ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಪ್ರಸಿದ್ದ ಶಿಲ್ಪಿಯಾದ ಶ್ರೀಯುತ ರೆಂಜಾಳ ಗೋಪಾಲಕೃಷ್ಣ ಶೆಣೈ ಯವರಿಂದ ಕೆತ್ತಲ್ಪಟ್ಟ ಶ್ರೀ ಪಾಂಡುರಂಗ ದೇವರ ಮೂರ್ತಿಯನ್ನು ಆರಾದಿಸುತ್ತಾ ಬರುತ್ತಿದ್ದು ಇದು ಈಗಲೂ ಭಕ್ತರ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ.
2001ರಲ್ಲಿ ಶ್ರೀ ಪಿ ಉಮಾನಾಥ್ ಶೆಣೈ ಮತ್ತು ಮಕ್ಕಳು ನೀಡಿದ ಶ್ರೀ ರುಖುಮಾಯಿ ಅಮ್ಮನವರ ಮೂರ್ತಿಯ ಪ್ರತಿಷ್ಟಾಪನೆಯಾಯಿತು.
ಈ ಸಂದರ್ಭದಲ್ಲಿ ಪ್ರಾರಂಭದಿಂದ ಆರಾಧಿಸಿಕೊಂಡು ಬರುತ್ತಿದ್ದ ಶ್ರೀ ರಾಮ ದೇವರ ಭಾವಚಿತ್ರವನ್ನು ಗರ್ಭಗುಡಿಯಲ್ಲಿ ಇಟ್ಟು ಪೂಜಿಸಲಾಗಿತ್ತಿದೆ.
ಶ್ರೀ ಪಾಂಡುರಂಗನ ಮಂದಿರದಲ್ಲಿ ವರ್ಷವಿಡೀ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತಿರುತ್ತದೆ. ಡಿಸೆಂಬರ್ ತಿಂಗಳಲ್ಲಿ ಗೀತಾಜಯಂತಿಯಂದು ವಾರ್ಷಿಕ ವಿಶೇಷ ಕಾರ್ಯಕ್ರಮ ಏಕಾಹ ಭಜನೋತ್ಸವ ನಡೆಯುತ್ತದೆ.