ಮಂದಿರದಲ್ಲಿ ಏಕಾಹ ಭಜನೋತ್ಸವ
ಮಹಾನಗರ : ಬಿಕರ್ನಕಟ್ಟೆ ಕಂಡೆಟ್ಟು ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರದಲ್ಲಿ ಏಕಾಹ ಭಜನೋತ್ಸವ ಇತ್ತೀಚೆಗೆ ನಡೆಯಿತು. ಮಂದಿರದ ಪ್ರಧಾನ ಅರ್ಚಕ ಸಚ್ಚಿದಾನಂದ ನೀಗ್ಲೆದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಡಲದ ಅಧ್ಯಕ್ಷ ಭರತೇಶ್ ಕುಮಾರ್, ಗೌರವಾಧ್ಯಕ್ಷ ಕೃಷ್ಣಪ್ಪ ಬಿ ಸನಿಲ್, ಕೋಶಾಧಿಕಾರಿ ರಾಧಾಕೃಷ್ಣ ರಾವ್, ಹಿರಿಯರಾದ ರಾಮ ಕುಂದರ್ , ಬಿ ಉಮೇಶ್ ಜಯಶ್ರೀ ಗೇಟ್ , ಪ್ರೊ. ವಿ ಜಯರಾಮ್ , ಅಜಯ್ , ಜಗದೀಶ್ ಆಚಾರ್ , ದುರ್ಗಾ ದಾಸ್ , ಮಂದಿರದ ಕಾರ್ಯಧರ್ಶಿ ಮನೋಹರ ಎಂ ರೈ, ಟ್ರಸ್ಟಿಗಳು , ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ಧರು.