ಸಾಮೂಹಿಕ ಅರ್ಚನೆ ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಲಿ
"ಸಾಮೂಹಿಕ ಅರ್ಚನೆ ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಲಿ "
Date: 2023-08-02, ಮಂಗಳೂರು : ನಗರದ ಬಿಕರ್ನಕಟ್ಟೆ ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರದಲ್ಲಿ ಶ್ರೀ ಪಾಂಡುರಂಗ ವಿಠಲ ದೇವರಿಗೆ ಸಾಮೂಹಿಕ ಲಕ್ಷ ತುಳಸಿ ಅರ್ಚನೆ ವೇದಮೂರ್ತಿ ಸಚ್ಚಿದಾನಂದ ನೀಗ್ಲೆ ನೇತೃತ್ವಾದಲ್ಲಿ ಸಂಪನ್ನಗೊಂಡಿತು. ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ಪಂಜ ಭಾಸ್ಕರ್ ಭಟ್. ತುಳಸಿಯ ಮಹತ್ವನ್ನು ತಿಳಿಸಿ. ತುಳಸಿ ಇಲ್ಲದೆ ಶ್ರೀ ಹರಿಗೆ ಪೂಜೆಯೇ ಇಲ್ಲ. ಭಜನೆ ಮತ್ತು ತುಳಸಿ ಎರಡು ಪಾಂಡುರಂಗನಿಗೆ ಪ್ರಿಯವಾದ ವಸ್ತು. ಈ ರೀತಿಯ ಸಾಮೂಹಿಕ ಅರ್ಚನೆಗಳು ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹೇಳಿದರು. ಹಿರಿಯರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಶಾಸಕ ವೇದವ್ಯಾಸ ಕಾಮತ್, ಕಾರ್ಪೋರೇಟೋರ್ ಶಕೀಲಾ ಕಾವ, ಗಣ್ಯರು , ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧರು. ದೇವರಿಗೆ ಅರ್ಚನೆಗೊಂಡ ತುಳಸಿಯನ್ನು ಕಾಸರಗೋಡಿನ ಉಕ್ಕಿನಡ್ಕಸ್ ಆಯುರ್ವೇಧಿಕ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.